Posts

Image
 ಗದ್ದೆಯ ಅಂಚಿನ ಮಣ್ಣಿನ ಗೂಡಿನಲ್ಲಿ ಡೊಂಗ್ರಿ ಕಪ್ಪೆ ತನ್ನೆರಡು ಮರಿಗಳೊಂದಿಗೆ ವಾಸವಾಗಿತ್ತು. ಜಗಳಗಂಟಿಯಾದ ಡೊಂಗ್ರಿ ಕಪ್ಪೆಗೆ ಮಾತು ಜೋರು.  ಸದಾ ವಟರ್ ವಟರ್ ಅನ್ನುತ್ತಿತ್ತು. ತನ್ನ ಮನೆ ಕಡೆ ಯಾರಾದರೂ ಬಂದರೆ, ತನ್ನ ವಿಷಯವನ್ನು ಯಾರಾದರೂ ಮಾತಾಡಿದರೆ ಅದು ಜಗಳಕ್ಕೆ ನಿಂತು ಅವರನ್ನು ಅಲ್ಲಿಂದ ಓಡಿಸುತ್ತಿತ್ತು.‌ ಮತ್ತೆಂದೂ ಬರದ ಹಾಗೆ ಬಯ್ದು ಕಳಿಸುತ್ತಿತ್ತು. ಆದ್ದರಿಂದಲೇ ಡೊಂಗ್ರಿಯ ಗೆಳೆತನ‌ ಯಾರೂ ಮಾಡುತ್ತಿರಲಿಲ್ಲ. ಒಂದು ಮುಂಜಾನೆ ಡೊಂಗ್ರಿ ಕಪ್ಪೆ ತನ್ನ ಪುಟ್ಟ ಮರಿಗಳೊಂದಿಗೆ ತನ್ನ‌ ಗೂಡಿನ‌ ಪಕ್ಕ ಚಿಕ್ಕ ಕಲ್ಲಿನ ಮೇಲೆ ಕುಳಿತಿತ್ತು. ಅದು ಮರಿಗಳಿಗೆ ನೀರಿಗೆ ಹಾರುವುದನ್ನು, ಈಜುವುದನ್ನು ಕಲಿಸಲು ಕುಳಿತಿತ್ತು. ಡೊಂಗ್ರಿ ಕಪ್ಪೆ ಕಣ್ಣನ್ನು ಅರ್ಧ ಮುಚ್ಚಿ, ಮುಖದ ಮೇಲೆ ನಗುವಿಲ್ಲದೆ ಕುಳಿತಿತ್ತು. ಕಪ್ಪೆ ಮರಿಗಳು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಸುತ್ತಲ ಪ್ರಕೃತಿಯನ್ನು ನೋಡುತ್ತಾ ಕುಳಿತಿದ್ದವು. ಆಗ ತಾನೇ ಬೆಳಗಾಗುತ್ತಿತ್ತು. ಸೂರ್ಯನ‌ ಬಿಸಿಲಿಗೆ ಗದ್ದೆಯ ಬದುವಿನಲ್ಲಿದ್ದ ಹುಲ್ಲಿನ ಮೇಲೆ ಮಂಜಿನ‌ ಹನಿಗಳು‌ ಹೊಳೆಯುತ್ತಿದ್ದವು. ಆಗಸದಲ್ಲಿ  ಮೋಡಗಳು ತೇಲಾಡುತ್ತಿದ್ದವು. ಸುತ್ತಲೂ ಇಬ್ಬನಿ ಮುಸುಕಿತ್ತು. ಅಮ್ಮನ ಜೊತೆ ಕೂತಿದ್ದ  ಮರಿಗಳಿಗೆ ಇದನ್ನೆಲ್ಲಾ ನೋಡುತ್ತಾ ಖುಷಿಯಾಯಿತು. ಒಂದು ಮರಿ ಅಮ್ಮನಲ್ಲಿ ಹೇಳಿತು. ಮರಿ: ಅಹಾ ಅಮ್ಮ.‌ ಈ ಪರಿಸರ ಎಷ್ಟು‌ ಸುಂದರವಾಗಿದೆ. ನೋಡಿದರೆ ನೋಡ್ತಾನೇ ಇರೋಣ ಅನ್ನಿಸ್ತದೆ.  ಡೊಂಗ್

ಮಾತು ಕೇಳದ ಹಲ್ಲಿ

Image
 ಪಿಂಚು ಹಲ್ಲಿ ಮಹಾ ಒರಟ. ಅದು ತನ್ನ ಅಮ್ಮ ಹಲ್ಲಿಯ ಮಾತನ್ನು ಕೇಳುತ್ತಿರಲಿಲ್ಲ. ಮನೆಯ ಹಿರಿಯನಾದ ಅಜ್ಜ ಹಲ್ಲಿಯ ಮಾತನ್ನೂ‌ ಕೇಳುತ್ತಿರಲಿಲ್ಲ. ಮನೆಯವರಿಗೆಲ್ಲ ಅದನ್ನು ಸಹಿಸಲು ಕಷ್ಟವಾಗುತ್ತಿತ್ತು. ಅದರ ಕೀಟಲೆಗಳನ್ನು ನೋಡಿಕೊಂಡು ಸುಮ್ಮನೆ‌ ಇರಬೇಕಾಗಿತ್ತು. ಅದರ ತುಂಟತನದಿಂದ ಬೇರೆಯವರಿಗೇನೂ ತೊಂದರೆ ಆಗುತ್ತಿರಲಿಲ್ಲ‌. ಆದರೆ ಅದುವೇ ತೊಂದರೆಗೊಳಗಾಗುತ್ತಿತ್ತು.  ಅಜ್ಜ: ಪಿಂಚು, ನೀನು ಜಾಣನಾಗಬೇಕು. ಅಮ್ಮ‌ ಅಥವಾ ಮನೆಯ ಹಿರಿಯರು‌‌‌ ಹೇಳಿದ ಮಾತನ್ನು ‌ಕೇಳಬೇಕಪ್ಪಾ. ನಾವು ಅನುಭವದಿಂದ ಕಲಿತ ಬುದ್ಧಿಮಾತನ್ನು ಹೇಳಿದರೆ ಅದು ನಿನ್ನ ಒಳ್ಳೆಯದಕ್ಕೆ ತಾನೇ? ಅದರಂತೆ ನಡೆದರೆ ಜೀವನ ಸಂತೋಷಮಯವಾಗುತ್ತದೆ. ಅಪಾಯದಲ್ಲಿ ಸಿಕ್ಕಾಗ ನೆರವಿಗೆ ಬರೋದು ನಮ್ಮ ಮಾತುಗಳೇ. ಪಿಂಚು- ಅಯ್, ಹೋಗಜ್ಜ ನೀನು.‌ ಯಾವಾಗ್ಲೂ ಇದನ್ನೇ ಹೇಳ್ತೀಯ.‌  ಅಜ್ಜ: ಹಾಗಲ್ಲ ಮಗೂ.. ಪಿಂಚು: ಆಯ್ತಜ್ಜ. ನಿನ್ನ ಮಾತು ಈ ಸಾರಿ ಕೇಳ್ತೇನೆ. ಆದ್ರೆ ಎಲ್ಲ ಸಾರಿಯೂ ಅಲ್ಲ. ಅಮ್ಮ ಅಂತೂ ಹಾಗ್ ಮಾಡ್ಬೇಡ, ಹೀಗ್ ಮಾಡ್ಬೇಡ ಅಂತಾನೇ ಇರ್ತಾಳೆ.‌ ಅದೆಲ್ಲ ನನಗಾಗಲ್ಲ. ನಂಗೆ ಹೇಗೆ ಬೇಕೋ ಹಾಗಿರ್ತೀನಿ. ಹಾಗೇ ಮಾಡ್ತೀನಿ. ಅಜ್ಜ: ಅಯ್ಯೋ, ನಿಂಗೆ ಎಷ್ಟು ಹೇಳಿದ್ರೂ ಅಷ್ಟೇ. ಇರಲಿ, ನಾನು ನಿಂಗೊಂದು ಕತೆ ಹೇಳ್ತೇನೆ. ಕತೆ ಅಂದ್ರೆ ಕತೆ ಅಲ್ಲ. ಶತ್ರುವಿನಿಂದ ಬಚಾವಾಗುವ ಒಂದು ಉಪಾಯ. ಸ್ವಲ್ಪ ಕೂತು ಕೇಳ್ತೀಯಾ? ಪಿಂಚು: ಆಗಲಿ, ಆಸಕ್ತಿ ಬಂದ್ರೆ ಪೂರ್ತಿ ಕೇಳ್ತೀನಿ. ಇಲ್ಲಾಂದ್ರೆ ಎದ್ದು ಆ

ಬೊಮ್ಮಯ 2

Image
ಒಂದು ಮುಸ್ಸಂಜೆ. ತಂದನಿ ತಾನೋ..ತಾನಿ ತಂದಾನೋ.. ಅವಲಕ್ಕಿ ಎಲ್ಲ ಬೊಮ್ಮ ತಿಂದಾನೋ.. ಅಜ್ಜಿ ಬಾವಿಯಿಂದ ನೀರೆಳೆಯುತ್ತಾಳೆ. ಅಯ್ಯೋ.. ಸೊಂಟ..  ಸೊಂಟ ಉಳುಕಿ , ಅಜ್ಜಿ‌ ನೆಲದಲ್ಲಿ‌ ಕುಳಿತುಕೊಳ್ಳುತ್ತಾಳೆ. ಅಯ್ಯೋ ಸೊಂಟ ಉಳುಕಿತು. ಕೊಡ ಹಗ್ಗ ಬಾವಿಗೆ ಬೀಳುತ್ತದೆ.  ಸರ್ರ್... ಢುಳುಂ..! ಅಯ್ಯೋ..  ಅಯ್ಯೋ, ನೀರಿಗೆ ಬಿದ್ದ ಸದ್ದು, ಅಜ್ಜೀ..(ಅಜ್ಜಿ ಬಾವಿಗೆ ಬಿದ್ದರಾ..?) ಓಡಿ ಬರ್ತಾನೆ.  ನೋಡ್ತಾನೆ ಬೆನ್ನು ಬಾಗಿಸಿ ವಕ್ರವಾಗಿ ಅಜ್ಜಿ ಕೂತಿದೆ ಅಜ್ಜೀ...(ಅಬ್ಬ ಸದ್ಯ ಅಂಥದ್ದೇನೂ ಆಗಿಲ್ಲ) ಏನಾಯ್ತಜ್ಜೀ.. ಅಜ್ಜಿ-  ಸೊಂಟ ಉಳುಕಿ ಚುಳುಕ್ ಚುಳುಕ್.. ಹಗ್ಗ ಕೊಡ ಬುಳುಕ್ ಬುಳುಕ್.. ನೋಡ್ತಾನೆ. ಕೊಡ ಅರ್ಧ ಮುಳುಗಿ ತೇಲುತ್ತಿತ್ತು. ಛೆ! ಒಳಗೆ ಕುಡಿಯಲು ನೀರಿಲ್ಲ ಮಗಾ? ನೀನ್ಯಾಕೆ ನೀರೆತ್ತಲು ಹೋಗಬೇಕಿತ್ತು. ನನ್ನಲ್ಲಿ ಹೇಳಿದ್ದರೆ ನಾನು ತರುತ್ತಿದ್ದೆ ಅಲ್ವ? ಮನೆಯಲ್ಲಿ ಹೆಣ್ಣುಮಗಳಿದ್ದಿದ್ರೆ ನನಗೆ ಈ ಕಷ್ಟ ಬರ್ತಿರಲಿಲ್ಲ ಮಗಾ! ಬಾ. ಈಗ ಕತ್ತಲಾಯಿತು. ನಾಳೆ ಬೆಳಗ್ಗೆ ಬಾವಿಗೆ ಇಳಿದು ಕೊಡ ಎತ್ತಿ ಕೊಡ್ತೇನೆ. ಅಜ್ಜಿ- ಹೇಗೆ ಬಾವಿಗೆ ಇಳಿಯೋದು? ಹಗ್ಗವೂ ಒಳಗೆ ಬಿದ್ದಿದೆ ಅಲ್ವ?  ಬೊ: ಚಿಂತಿಸಬೇಡ.ಏನಾದರೂ ಉಪಾಯ ಯೋಚಿಸ್ತೇನೆ. ಈಗ ಬಾ. ರಾತ್ರಿ ಬೊಮ್ಮಯ ಯೋಚಿಸ್ತಾ ಮಲಗಿರುವಾಗ.. 'ಗುಟಕ್‌.ಗುಟಕ್..' ಅರೇ, ಏನದು ಸದ್ದು? ಹೋಗಿ ನೋಡ್ತಾನೆ.  ಓ ಅಜ್ಜಿಗೆ ಬಾಯಾರಿಕೆ ಆಗಿದೆ. ನೀರು ಕುಡಿದರೆ ಸರಿಯಾಗ್ತದೆ.. ನೀರಿನ‌ ಪಾತ್ರೆ ನೋಡ

ಮಹತಿ ಕಳ್ಳರನ್ನು ಓಡಿಸಿದಳು

Image
 ಮಹತಿ ಪ್ರಾಣಿಪಕ್ಷಿಗಳ ಸದ್ದನ್ನು ಅನುಕರಣೆ ಮಾಡಿ ಅವಳ ಸ್ನೇಹಿತರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಳು. ಮಹತಿ: ಬೌ..ಬೌ..ವೌ..ಆಗ ಬೆಕ್ಕಿನ‌ಮರಿ  ಹಾಲು ಬೇಕು ಅಂತ ಕೂಗಿತು..ಮಿಯಾಂ ಮಿಯಾಂ.   ಮ: ಮನೆಯ ಪಕ್ಕದಲ್ಲೇ ಒಂದು ನದಿ ಹರಿಯುತ್ತಿತ್ತು.. ಸ್.. ಎಲ್ಲರೂ ಖುಷಿ ಮತ್ತು ಆಶ್ಚರ್ಯದಿಂದ ಅವಳ ಈ ಚಮತ್ಕಾರವನ್ನು ನೋಡುತ್ತಿದ್ದರು.‌ ಸದ್ದು ಮಾಡುವಾಗ ಬಾಯಿಯನ್ನು ಹಿಗ್ಗಿಸಿ ಕುಗ್ಗಿಸಿದಾಗ  ಅವಳ‌ಮುಖವೂ ವಕ್ರವಾಗುವುದನ್ನು ನೋಡುವಾಗ ಎಲ್ಲರಿಗೂ ತಮಾಷೆ ಎನ್ನಿಸಿ ನಗುತ್ತಿದ್ದರು. ಅವರೆಲ್ಲರ ಕೇಕೆ, ಚಪ್ಪಾಳೆಯಿಂದ ಮಹತಿ ಮತ್ತಷ್ಟು ಉತ್ಸಾಹದಿಂದ ಅನುಕರಣೆ ಮಾಡುತ್ತಿದ್ದಳು. ಮಹತಿ: ಆಗ.. ಮರದ ಮೇಲೆ‌ ಇದ್ದ ನವಿಲು‌ ಹೀಗೆ ಕೂಗಿತು.. ಕೇಂ ಕೇಂ... ಎಲ್ಲರೂ: ಏ.. ಸೂಪರ್ ಸೂಪರ್.. ಮ: ಆಗ ಒಂದು ಹುಲಿ ಘರ್ಜಿಸಿತು.. ಘರ್ರ್..... ಅದನ್ನು ನೋಡಿ ಮರದ ಮೇಲೆ ಮಂಗ.. ಕಿ.ಕಿ..ಕಿ..ಕಿ.. ಎಲ್ಲರೂ: ಹ್ಹಹ್ಹಹ್ಹಾ.. ಅವಳ ಗುರುಗಳಿಗೂ ಅವಳ ಈ ಪ್ರತಿಭೆ ಇಷ್ಟವಾಗಿತ್ತು.  ಟೀಚರ್: ರೈಲು ಹೇಗೆ ಕೂಗುತ್ತದೆ ಮಹತಿ..? ಮಹತಿ: ಕೂ..ಚುಚುಕ್ ಚುಚುಕ್..ಚುಚುಕ್ ಚುಚುಕ್..ಕೂ.. ಸ್ನೇಹಿತರು ಅವಳಲ್ಲಿ ಬೇರೆ ಬೇರೆ ಸದ್ದನ್ನು ಮಾಡುವಂತೆ ಕೇಳಿ ಕೇಳಿ ಖುಷಿಪಡುತ್ತಿದ್ದರು‌. ಇದರ ಜೊತೆ ಮಹತಿಗೆ ಕೈಯ ನೆರಳಿನಿಂದ ಪ್ರಾಣಿಪಕ್ಷಿಗಳ ಆಕೃತಿಗಳನ್ನು ಗೋಡೆ ಮೇಲೆ ಮೂಡಿಸುವ ಆಟವೂ ತಿಳಿದಿತ್ತು.  ಅವಳ ಈ ಹವ್ಯಾಸಗಳಿಂದಾಗಿ ಮಹತಿ ಇಡೀ ಶಾಲೆಯಲ್ಲೇ ಜನಪ್ರಿಯಳಾಗಿದ್ದಳು. ಒಂ

ಪೆಂಗಪ್ಪ ಮಂಗಪ್ಪ

Image
ಪೆಂಗಪ್ಪಾ, ಈ ಸಾರಿ ನಮ್ಮ ಉರುಳಿಗೆ ಹಂದಿ ಬೀಳೋದ್ ಗ್ಯಾರಂಟಿ ಮಾರಾಯ. ಪೆ- ಹಂದಿ ಬೀಳದಿದ್ರೆ ಹೋಗಲಿ. ಮೊಲವೋ, ಜಿಂಕೆನಾದ್ರೂ ಬೀಳಬೇಕು. ಬರೇ ಅನ್ನ‌ ಸಾರು ತಿಂದು ನಾಲಗೆ ಜಡ್ಡುಗಟ್ಟಿ ಹೋಗಿದೆ. ಮ- ಹಂದಿಯೇ ಬೀಳ್ತದೆ ಬಿಡು. ಉರುಳು ಬಲವಾಗಿ ಇದೆ. ಸರಿ. ಈಗ ನಾನು ಕಾಡಿನ‌ ಈ ಕಡೆ ಹೋಗ್ತೇನೆ. ನೀನು ಆ ಕಡೆ ಹೋಗು. ಹಂದಿ ಕಾಣಿಸಿದರೆ ಇಬ್ಬರೂ ಗದ್ದಲ ಮಾಡ್ತಾ ಈ ಉರುಳಿನ ಬಳಿಗೆ ಹಂದಿಯನ್ನು ಓಡಿಸಿಕೊಂಡು ಬರೋದು ಪ್ಲಾನು. ಪೆ- ಓಕೆ. ಹಂದಿ ಕಾಣಿಸಿದರೆ ನಾನು ನವಿಲಿನ ಹಾಗೆ ಕೂಗಿ ನಿನಗೆ ಸೂಚನೆ ಕೊಡ್ತೇನೆ.  ಮಂ: ಬೇಡ ನಾನು ಫೋನ್ ಮಾಡ್ತೇನೆ. ಪೆ: ಬೇಡ ಬೇಡ. ಆಗ ಪ್ರಾಣಿಗಳಿಗೆ ಮನುಷ್ಯರು ಇರೋದು ಗೊತ್ತಾಗ್ತದೆ. ಮಂ: ಮೆಸೇಜು ಮಾಡಿದರೆ? ಪೆ: ಅಯ್ಯೋ ಪೆಂಗ. ಕಾಡಿನಲ್ಲಿ‌ ನೆಟ್ವರ್ಕ್ ಸಮಸದಯೆ ಆಗಿ ಸಮಸ್ಯೆ ಆಗ್ತದೆ. ನಾನು ನವಿಲಿನ ಹಾಗೆ ಕೂಗ್ತೇನೆ. ಅದೇ ಒಳ್ಳೆಯದು. ಮ-ಸರಿ ಒಮ್ಮೆ ಕೂಗಿ ತೋರಿಸು. ಪೆ- ಕೇಂ..ಕೇಂ.. ಮ-ಸೂಪರ್.. ಹಂದಿ ಮೊದಲು ನನಗೆ ಕಾಣಿಸಿದ್ರೆ ನಾನು ಕೂಗ್ತೇನೆ. ಅವರಿಬ್ಬರು ಆ ಬದಿ ಈ ಬದಿ ಹೋದರು. ಪೆಂಗಪ್ಪ ಕೂತಿದ್ದ. ತುಂಬಾ ಸಮಯವಾದರೂ ಹಂದಿಯ ಸುಳಿವಿಲ್ಲ.  ಪೆ- ದರಿದ್ರ.. ಇಂದು ಒಂದು ಹಂದಿನೂ ಕಾಣಿಸ್ತಾ ಇಲ್ಲ. ಇರಲಿ ಕಾಯೋಣ. ಯೋಚಿಸ್ತಾನೆ. ಮಂಗಪ್ಪ ಏನ್ ಮಾಡ್ತಿರಬಹುದು? ಅತ್ತ ಕಡೆ ಮಂಗಪ್ಪ.. ಮ-ಯಬಾ. ಭಯಂಕರ ಸೊಳ್ಳೆಕಾಟ. ಹಂದಿ ಬರೋ ತನಕ ಹೆಂಗಪ್ಪಾ ಕೂತಿರೋದು. ಒಂದು ಉಪಾಯ ಮಾಡ್ತೇನೆ ಪಂಚೆಯನ್ನು ಬಿಚ್ಚಿ ತಲೆಗೆ ಮುಖಕ

ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

Image
ಹಕ್ಕಿ ಜೇನ್ ಗುಳಕ ಅಳ್ತಾ ಇದ್ದ. ಅವನ ಗೆಳತಿ ಜೇನ್ ಗುಳಕಿ ಬಿದ್ದು ಬಿದ್ದು ನಗ್ತಾ ಇದ್ದಳು ಜೇನ್ ಗುಳಕ- ನಗು ನಗು. ನನ್ನ ಕಷ್ಟ ನಂಗೆ. ನಿಂಗೇನು? ಜೇನ್ ಗುಳಕಿ- ಹಾಹಹ್ಹಹ್ಹ ಹೋಹ್ಹೊಹ್ಹೊಹ್ಹೊ.ಹಹ್ಹಹ್ಹ..ಅಯ್ಯೋ ನಿನ್ನ ಅವಸ್ಥೆಯೇ! ನಿನ್ನ ಪಾಡು ನೋಡಿದ್ರೆ ಅಳಬೇಕು ಅನ್ನಿಸ್ತಿದೆ. ಆದ್ರೆ ನಾನು ಅಳಲ್ಲ, ನಗ್ತೇನೆ. ಹಾಹಹ್ಹಹ್ಹ.. - ನಗಬೇಡವೇ ನಂಗೆ ತುಂಬ ಬೇಜಾರಾಗ್ತದೆ. ನಿಂಗೆ ನನ್ನ ಮೇಲೆ ಪ್ರೀತಿಯೇ ಇಲ್ಲ! -ಪ್ರೀತಿ ಅಂತೆ ಪ್ರೀತಿ! ಒಂದು ಜೇನ್ ಹುಳಾನ ಹಿಡಿದು ತಿನ್ನೋಕೂ ಬರಲ್ಲ ನಿಂಗೆ. ಅಷ್ಟಕ್ಕೇ ಅಳ್ತೀಯ. ಇನ್ನು ನನ್ನ ಹೆಂಗೆ ಸಾಕ್ತೀಯಾ? ನಿನ್ನ ಮದ್ವೆ ಆದ್ರೆ ನನ್ನ ಬದುಕು ಬದನೆಕಾಯ್ ಆಗಿಹೋಗುತ್ತೆ! -  ತಾಳು ತಾಳು. ಅಮ್ಮನ ಹತ್ರ ಹೇಳ್ತೇನೆ. - ಹೇಳ್ಕೊ ಹೋಗ್. ನಾನು ಯಾರಿಗೂ ಹೆದರೋಳಲ್ಲ. ನಿನಗೂ, ನಿನ್ನಮ್ಮಂಗೂ! - ನೀನು ಬರೀ ಬಜಾರಿ. ಯಾಕಾದ್ರೂ ನಿನ್ನ ಸಹವಾಸ ಮಾಡಿದ್ನೋ ನಾನು? - ಹಹ..ಹೋಗಿ ಅಮ್ಮನ ಬಾಲ ಹಿಡ್ಕೊಂಡ್ ತಿರುಗು..ಪೆದ್ದು ಕಂದಾ! ( ಗುಳಕ ಜೋಲುಮೋರೆಯಲ್ಲಿ ಅಮ್ಮನ ಬಳಿಗೆ ಬಂದ) - ಅಮ್ಮಾ.. ಅಮ್ಮಾ.. ಅಯ್ಯೋ ಮಗಾ.. ಯಾಕ್ ಅಳ್ತಾ ಇದೀಯಾ? ನನ್ ಕಂದನಿಗೆ ಯಾರ್ ಏನಪ್ಪಾ ಮಾಡಿದ್ರು? - ನೋಡಮ್ಮ ಆ ಬಜಾರಿ ಜೇನ್ಗುಳಕಿ  ನಂಗೆ ತಮಾಷೆ ಮಾಡ್ತಾಳೆ. - ( ತುಸು ಕೋಪದಿಂದ) ಅಯ್ಯೊ ಮನೆಮುರುಕಿಯೇ! ಏನಾಗಿದೆ ಅಂತೆ ಅವಳಿಗೆ? ಯಾಕೆ ನಿಂಗೆ ತಮಾಷೆ ಮಾಡ್ತಾಳೆ? - ನಂಗೆ ಜೇನ್ ಹುಳಾನ ಹಿಡಿಯೋ ಕ್ರಮ, ಹಿಡಿದು ತಿನ್ನೋ ಕ್ರಮ ಗೊತ್

ನಿಜವಾದ ರಾಜ

Image
 ಮಹಾಪುರ ಎಂಬ ಸಾಮ್ರಾಜ್ಯ. ಅದಕ್ಕೊಬ್ಬ ರಾಜ. ಹೆಸರು ಶಕ್ತಿವರ್ಮ. ಒಂದು ದಿನ‌ ಆಸ್ಥಾನದಲ್ಲಿ ರಾಜ್ಯದ ಅಭಿವೃದ್ಧಿಯ ಮಾತುಕತೆ ನಡೆಯುತ್ತಿತ್ತು. ಪಟ್ಟಣ ಪಟ್ಟಣಗಳನ್ನು ಜೋಡಿಸುವಂತಹ ಅಗಲವಾದ ರಾಜರಸ್ತೆಯೊಂದು ಆ ರಾಜ್ಯಕ್ಕೆ ಬೇಕಾಗಿತ್ತು. ಅದನ್ನು ಮಾಡುವ ಬಗ್ಗೆ ಮಂತ್ರಿಮಡಲದಲ್ಲಿ ವಿಷಯ ಚರ್ಚೆಯಾಗಿ ರಾಜ ಒಂದು ವಾರದೊಳಗಾಗಿ ಕೆಲಸ ಆರಂಭವಾಗುವಂತೆ ಆಜ್ಞೆ ಹೊರಡಿಸಿದ. ರಾಜನ ಸಮ್ಮುಖದಲ್ಲಿ ಸಮಾಲೋಚನೆಯಾಗಿ ರಸ್ತೆನಿರ್ಮಾಣಕ್ಕೆ ಸೂಕ್ತ ವ್ಯಕ್ತಿಯೊಬ್ಬನನ್ನು ನೇಮಿಸಲಾಯಿತು.  ಅವನ ಹೆಸರು ಹೃದಯದೇವ.  ಹೃದಯದೇವ ಒಳ್ಳೆಯವನಾಗಿದ್ದ. ಆದರೆ ಆಸ್ಥಾನದ ಮಂತ್ರಿಗೆ ಪೂರ್ಣ ಹಿಡಿಸಿರಲಿಲ್ಲ.  ಮಂತ್ರಿ ಕುಶಲಮತಿ ಒಳ್ಳೆಯವನೇ. ಆದರೆ ತುಸು ಆಸೆಬುರುಕನಾಗಿದ್ದ. ರಾಜನಿಗೆ ತಿಳಿಯದಂತೆ ಅಡ್ಡದಾರಿಯಿಂದ ಎರಡು ಕಾಸು ಹೆಚ್ಚು ಗಳಿಸುವ ಮನಸ್ಸಿನವನು. ರಸ್ತೆ ನಿರ್ಮಿಸುವ ಕೆಲವು ಬೇರೆ ಕೆಲಸಗಾರರು ಮಂತ್ರಿಗೆ ಹಣದ ಆಸೆ ತೋರಿಸಿ ಆ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯಲು ಯತ್ನಿಸಿದರು. ಆದರೆ ರಾಜನ ಕಟ್ಟುನಿಟ್ಟಿನ, ವಿಚಾರವಂತಿಕೆಯ ನಡೆ ಅದಕ್ಕೆ ಇಂಬು ನೀಡದೆ ರಸ್ತೆ ನಿರ್ಮಾಣದ ಕೆಲಸ ಹೃದಯದೇವನಿಗೇ ವಹಿಸಲಾಗಿತ್ತು. ಆದರೂ ಮಂತ್ರಿ ಸೂಕ್ತ ಸಮಯಕ್ಕೆ ಕಾಯುತ್ತಿದ್ದ. ಮಂತ್ರಿಯನ್ನು ಭೇಟಿಯಾಗಿದ್ದ ಕೆಲಸಗಾರರು ರಾತ್ರಿ ನಿದ್ದೆ ಬಾರದೆ ಹೊರಳಾಡಿದರು.  ರಸ್ತೆ ನಿರ್ಮಾಣದ ಸ್ಥಳ ವೀಕ್ಷಣೆಗೆ ಹೃದಯದೇವ ರಾತ್ರಿಸಂಚಾರ ಕೈಗೊಂಡ. ರಸ್ತೆ ಸಾಗುವ ಹಾದಿಯಲ್ಲೊಂದು ದೊಡ್ಡದಾದ ಮರ ಇ