ಪೆಂಗಪ್ಪ ಮಂಗಪ್ಪ
ಪೆಂಗಪ್ಪಾ, ಈ ಸಾರಿ ನಮ್ಮ ಉರುಳಿಗೆ ಹಂದಿ ಬೀಳೋದ್ ಗ್ಯಾರಂಟಿ ಮಾರಾಯ.
ಪೆ- ಹಂದಿ ಬೀಳದಿದ್ರೆ ಹೋಗಲಿ. ಮೊಲವೋ, ಜಿಂಕೆನಾದ್ರೂ ಬೀಳಬೇಕು. ಬರೇ ಅನ್ನ ಸಾರು ತಿಂದು ನಾಲಗೆ ಜಡ್ಡುಗಟ್ಟಿ ಹೋಗಿದೆ.
ಮ- ಹಂದಿಯೇ ಬೀಳ್ತದೆ ಬಿಡು. ಉರುಳು ಬಲವಾಗಿ ಇದೆ. ಸರಿ. ಈಗ ನಾನು ಕಾಡಿನ ಈ ಕಡೆ ಹೋಗ್ತೇನೆ. ನೀನು ಆ ಕಡೆ ಹೋಗು. ಹಂದಿ ಕಾಣಿಸಿದರೆ ಇಬ್ಬರೂ ಗದ್ದಲ ಮಾಡ್ತಾ ಈ ಉರುಳಿನ ಬಳಿಗೆ ಹಂದಿಯನ್ನು ಓಡಿಸಿಕೊಂಡು ಬರೋದು ಪ್ಲಾನು.
ಪೆ- ಓಕೆ. ಹಂದಿ ಕಾಣಿಸಿದರೆ ನಾನು ನವಿಲಿನ ಹಾಗೆ ಕೂಗಿ ನಿನಗೆ ಸೂಚನೆ ಕೊಡ್ತೇನೆ.
ಮಂ: ಬೇಡ ನಾನು ಫೋನ್ ಮಾಡ್ತೇನೆ.
ಪೆ: ಬೇಡ ಬೇಡ. ಆಗ ಪ್ರಾಣಿಗಳಿಗೆ ಮನುಷ್ಯರು ಇರೋದು ಗೊತ್ತಾಗ್ತದೆ.
ಮಂ: ಮೆಸೇಜು ಮಾಡಿದರೆ?
ಪೆ: ಅಯ್ಯೋ ಪೆಂಗ. ಕಾಡಿನಲ್ಲಿ ನೆಟ್ವರ್ಕ್ ಸಮಸದಯೆ ಆಗಿ ಸಮಸ್ಯೆ ಆಗ್ತದೆ. ನಾನು ನವಿಲಿನ ಹಾಗೆ ಕೂಗ್ತೇನೆ. ಅದೇ ಒಳ್ಳೆಯದು.
ಮ-ಸರಿ ಒಮ್ಮೆ ಕೂಗಿ ತೋರಿಸು.
ಪೆ- ಕೇಂ..ಕೇಂ..
ಮ-ಸೂಪರ್.. ಹಂದಿ ಮೊದಲು ನನಗೆ ಕಾಣಿಸಿದ್ರೆ ನಾನು ಕೂಗ್ತೇನೆ.
ಅವರಿಬ್ಬರು ಆ ಬದಿ ಈ ಬದಿ ಹೋದರು.
ಪೆಂಗಪ್ಪ ಕೂತಿದ್ದ. ತುಂಬಾ ಸಮಯವಾದರೂ ಹಂದಿಯ ಸುಳಿವಿಲ್ಲ.
ಪೆ- ದರಿದ್ರ.. ಇಂದು ಒಂದು ಹಂದಿನೂ ಕಾಣಿಸ್ತಾ ಇಲ್ಲ. ಇರಲಿ ಕಾಯೋಣ. ಯೋಚಿಸ್ತಾನೆ. ಮಂಗಪ್ಪ ಏನ್ ಮಾಡ್ತಿರಬಹುದು?
ಅತ್ತ ಕಡೆ ಮಂಗಪ್ಪ..
ಮ-ಯಬಾ. ಭಯಂಕರ ಸೊಳ್ಳೆಕಾಟ. ಹಂದಿ ಬರೋ ತನಕ ಹೆಂಗಪ್ಪಾ ಕೂತಿರೋದು. ಒಂದು ಉಪಾಯ ಮಾಡ್ತೇನೆ
ಪಂಚೆಯನ್ನು ಬಿಚ್ಚಿ ತಲೆಗೆ ಮುಖಕ್ಕೆ ಸುತ್ತಿಕೊಳ್ತಾನೆ.
ಆಗ ನವಿಲೊಂದು ಕಾಣಿಸ್ತದೆ.
ಮ- ತತ್ಥೇರಿಕೆ. ಇದ್ಯಾಕಪ್ಪಾ ಬಂತು ಇಲ್ಲಿಗೆ? ಈಗ ಇದು ಕೂಗಿದರೆ, ನಾನೇ ಕೂಗಿ ಸೂಚನೆ ಕೊಟ್ಟದ್ದು ಅಂತ ಪೆಂಗಪ್ಪ ಅಂದ್ಕೊಂಡ್ ಬಿಡ್ತಾನೆ. ಶ್ ಶ್..
ಕಲ್ಲು ತೆಗೆದು ಎಸೆಯುತ್ತಾನೆ. ಅದು ಕೆಳಗೆ ಬೀಳ್ತದೆ.ಆಗ ಪೊದೆಯಿಂದ ಗುರ್ರ್( ಹುಲಿ). ಅದು ಜಿಂಕೆಗೆ ಹೊಂಚುಹಾಕ್ತತ್ತು.
ಮ-ಅರೆ..ಅದೇನಪ್ಪಾ ಘರ್ಜಿಸ್ತಿರೋದು? ಅಯ್ಯೋ ಹುಲಿ!
ಆಗ ನವಿಲು ಕೇಂ ಕೇಂ..
ಮ-ಅಯ್ಯೋ ಎಲ್ಲಾ ಗ್ರಹಚಾರ ಒಟ್ಟಿಗೇ ಬಂತಲ್ಲಪ್ಪ..
ಅತ್ತ ಕಡೆ ಪೆಂಗಪ್ಪ..
ಮಂಗಪ್ಪನ ಕಡೆಯಿಂದ "ಕೇಂ ಕೇಂ.."
ಓ.. ಮಂಗಪ್ಪನ ಸೂಚನೆ..ಪರವಾಗಿಲ್ಲ. ಥೇಟ್ ನವಿಲಿನ ಹಾಗೇ ಕೂಗ್ತಾ ಇದ್ದಾನೆ.
ಗದ್ದಲ ಮಾಡ್ತಾ
ಓಡಿಕೊಂಡು ಬರ್ತಾನೆ. ಕೇಂ ಕೇಂ ಹಿಡಿಯೋ..
ಆಗ ಹುಲಿ ಬಂಡೆ ಮೇಲೆ ನಿಂತು ಗರ್ಜಿಸಿತು.
ಅಯ್ಯೋ ಹುಲಿ.!
ಮ- ಪೆಂಗಪ್ಪಾ..ಓಡು ಓಡು..
ಓಡ್ತಾರೆ. ಎದುರಿಗೆ ಒಂದು ಹಂದಿ ಓಡ್ತಾ ಬರ್ತಿದೆ..
ಬ್ರೇಕ್ ಹಾಕಿದಂತೆ ನಿಲ್ಲುವರು.
ಪೆ- ಅಯ್ಯೋ, ಹಂದಿ.... ಎದುರಿಗೇ ಬರ್ತಾ ಇದೆ. ತಿರುಗಿ ಓಡು.
ಮ- ಎಲ್ಲಿಗೆ ಓಡೋದು. ಆ ಕಡೆ ಹುಲಿ ಇದೆಯಲ್ಲ.
ಪೆ- ಜೀವ ಬೇಕಿದ್ರೆ ಎಲ್ಲಾದರೂ ಓಡಬೇಕು.
ಮ- ಇವತ್ತು ಎದ್ದು ಯಾರ ಮುಖ ನೋಡಿದ್ನೋ.
ಓಡ್ತಾರೆ.
ಕಲ್ಲು ಎಡವಿ ಇಬ್ಬರೂ ಹಾರಿ, ತರಗೆಲೆ ಮೇಲೆ ಜಾರಿ ಅವರೇ ಹಾಕಿದ ಉರುಳಿಗೆ ಬೀಳ್ತಾರೆ.
ಮ- ಅಯ್ಯೋ, ನಮ್ಮ ಉರುಳಲ್ಲಿ ನಾವೇ ಬಿದ್ದೆವು.
ಪೆ-ಹಾಳು ನವಿಲು ನಮ್ಮ ಯೋಜನೆ ಎಲ್ಲ ಹಾಳು ಮಾಡಿತು!
ಮ- ಹಾಳು ಮಾಡಿದ್ದು ನವಿಲಲ್ಲ, ನೀನು. ನಾವು ನಾಯಿ ಹಾಗೆ ಬೊಗಳಿ ಸೂಚನೆ ಕೊಟ್ಟಿದ್ದರೆ ಈ ಕಷ್ಟ ಬರ್ತಿರಲಿಲ್ಲ.
ಪೆ- ಓ ಹೌದಲ್ಲ. ಒಮ್ಮೆ ಬೊಗಳಿ ತೋರಿಸು.
ಮ- ಬೌ ಬೌ..
ಅತ್ತಲಾಗೆ ಘರ್ರ್....
ಅಯ್ಯೋ..

Comments
Post a Comment