Posts

Showing posts from January, 2023

ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

Image
ಹಕ್ಕಿ ಜೇನ್ ಗುಳಕ ಅಳ್ತಾ ಇದ್ದ. ಅವನ ಗೆಳತಿ ಜೇನ್ ಗುಳಕಿ ಬಿದ್ದು ಬಿದ್ದು ನಗ್ತಾ ಇದ್ದಳು ಜೇನ್ ಗುಳಕ- ನಗು ನಗು. ನನ್ನ ಕಷ್ಟ ನಂಗೆ. ನಿಂಗೇನು? ಜೇನ್ ಗುಳಕಿ- ಹಾಹಹ್ಹಹ್ಹ ಹೋಹ್ಹೊಹ್ಹೊಹ್ಹೊ.ಹಹ್ಹಹ್ಹ..ಅಯ್ಯೋ ನಿನ್ನ ಅವಸ್ಥೆಯೇ! ನಿನ್ನ ಪಾಡು ನೋಡಿದ್ರೆ ಅಳಬೇಕು ಅನ್ನಿಸ್ತಿದೆ. ಆದ್ರೆ ನಾನು ಅಳಲ್ಲ, ನಗ್ತೇನೆ. ಹಾಹಹ್ಹಹ್ಹ.. - ನಗಬೇಡವೇ ನಂಗೆ ತುಂಬ ಬೇಜಾರಾಗ್ತದೆ. ನಿಂಗೆ ನನ್ನ ಮೇಲೆ ಪ್ರೀತಿಯೇ ಇಲ್ಲ! -ಪ್ರೀತಿ ಅಂತೆ ಪ್ರೀತಿ! ಒಂದು ಜೇನ್ ಹುಳಾನ ಹಿಡಿದು ತಿನ್ನೋಕೂ ಬರಲ್ಲ ನಿಂಗೆ. ಅಷ್ಟಕ್ಕೇ ಅಳ್ತೀಯ. ಇನ್ನು ನನ್ನ ಹೆಂಗೆ ಸಾಕ್ತೀಯಾ? ನಿನ್ನ ಮದ್ವೆ ಆದ್ರೆ ನನ್ನ ಬದುಕು ಬದನೆಕಾಯ್ ಆಗಿಹೋಗುತ್ತೆ! -  ತಾಳು ತಾಳು. ಅಮ್ಮನ ಹತ್ರ ಹೇಳ್ತೇನೆ. - ಹೇಳ್ಕೊ ಹೋಗ್. ನಾನು ಯಾರಿಗೂ ಹೆದರೋಳಲ್ಲ. ನಿನಗೂ, ನಿನ್ನಮ್ಮಂಗೂ! - ನೀನು ಬರೀ ಬಜಾರಿ. ಯಾಕಾದ್ರೂ ನಿನ್ನ ಸಹವಾಸ ಮಾಡಿದ್ನೋ ನಾನು? - ಹಹ..ಹೋಗಿ ಅಮ್ಮನ ಬಾಲ ಹಿಡ್ಕೊಂಡ್ ತಿರುಗು..ಪೆದ್ದು ಕಂದಾ! ( ಗುಳಕ ಜೋಲುಮೋರೆಯಲ್ಲಿ ಅಮ್ಮನ ಬಳಿಗೆ ಬಂದ) - ಅಮ್ಮಾ.. ಅಮ್ಮಾ.. ಅಯ್ಯೋ ಮಗಾ.. ಯಾಕ್ ಅಳ್ತಾ ಇದೀಯಾ? ನನ್ ಕಂದನಿಗೆ ಯಾರ್ ಏನಪ್ಪಾ ಮಾಡಿದ್ರು? - ನೋಡಮ್ಮ ಆ ಬಜಾರಿ ಜೇನ್ಗುಳಕಿ  ನಂಗೆ ತಮಾಷೆ ಮಾಡ್ತಾಳೆ. - ( ತುಸು ಕೋಪದಿಂದ) ಅಯ್ಯೊ ಮನೆಮುರುಕಿಯೇ! ಏನಾಗಿದೆ ಅಂತೆ ಅವಳಿಗೆ? ಯಾಕೆ ನಿಂಗೆ ತಮಾಷೆ ಮಾಡ್ತಾಳೆ? - ನಂಗೆ ಜೇನ್ ಹುಳಾನ ಹಿಡಿಯೋ ಕ್ರಮ, ಹಿಡಿದು ತಿನ್ನೋ ...

ನಿಜವಾದ ರಾಜ

Image
 ಮಹಾಪುರ ಎಂಬ ಸಾಮ್ರಾಜ್ಯ. ಅದಕ್ಕೊಬ್ಬ ರಾಜ. ಹೆಸರು ಶಕ್ತಿವರ್ಮ. ಒಂದು ದಿನ‌ ಆಸ್ಥಾನದಲ್ಲಿ ರಾಜ್ಯದ ಅಭಿವೃದ್ಧಿಯ ಮಾತುಕತೆ ನಡೆಯುತ್ತಿತ್ತು. ಪಟ್ಟಣ ಪಟ್ಟಣಗಳನ್ನು ಜೋಡಿಸುವಂತಹ ಅಗಲವಾದ ರಾಜರಸ್ತೆಯೊಂದು ಆ ರಾಜ್ಯಕ್ಕೆ ಬೇಕಾಗಿತ್ತು. ಅದನ್ನು ಮಾಡುವ ಬಗ್ಗೆ ಮಂತ್ರಿಮಡಲದಲ್ಲಿ ವಿಷಯ ಚರ್ಚೆಯಾಗಿ ರಾಜ ಒಂದು ವಾರದೊಳಗಾಗಿ ಕೆಲಸ ಆರಂಭವಾಗುವಂತೆ ಆಜ್ಞೆ ಹೊರಡಿಸಿದ. ರಾಜನ ಸಮ್ಮುಖದಲ್ಲಿ ಸಮಾಲೋಚನೆಯಾಗಿ ರಸ್ತೆನಿರ್ಮಾಣಕ್ಕೆ ಸೂಕ್ತ ವ್ಯಕ್ತಿಯೊಬ್ಬನನ್ನು ನೇಮಿಸಲಾಯಿತು.  ಅವನ ಹೆಸರು ಹೃದಯದೇವ.  ಹೃದಯದೇವ ಒಳ್ಳೆಯವನಾಗಿದ್ದ. ಆದರೆ ಆಸ್ಥಾನದ ಮಂತ್ರಿಗೆ ಪೂರ್ಣ ಹಿಡಿಸಿರಲಿಲ್ಲ.  ಮಂತ್ರಿ ಕುಶಲಮತಿ ಒಳ್ಳೆಯವನೇ. ಆದರೆ ತುಸು ಆಸೆಬುರುಕನಾಗಿದ್ದ. ರಾಜನಿಗೆ ತಿಳಿಯದಂತೆ ಅಡ್ಡದಾರಿಯಿಂದ ಎರಡು ಕಾಸು ಹೆಚ್ಚು ಗಳಿಸುವ ಮನಸ್ಸಿನವನು. ರಸ್ತೆ ನಿರ್ಮಿಸುವ ಕೆಲವು ಬೇರೆ ಕೆಲಸಗಾರರು ಮಂತ್ರಿಗೆ ಹಣದ ಆಸೆ ತೋರಿಸಿ ಆ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯಲು ಯತ್ನಿಸಿದರು. ಆದರೆ ರಾಜನ ಕಟ್ಟುನಿಟ್ಟಿನ, ವಿಚಾರವಂತಿಕೆಯ ನಡೆ ಅದಕ್ಕೆ ಇಂಬು ನೀಡದೆ ರಸ್ತೆ ನಿರ್ಮಾಣದ ಕೆಲಸ ಹೃದಯದೇವನಿಗೇ ವಹಿಸಲಾಗಿತ್ತು. ಆದರೂ ಮಂತ್ರಿ ಸೂಕ್ತ ಸಮಯಕ್ಕೆ ಕಾಯುತ್ತಿದ್ದ. ಮಂತ್ರಿಯನ್ನು ಭೇಟಿಯಾಗಿದ್ದ ಕೆಲಸಗಾರರು ರಾತ್ರಿ ನಿದ್ದೆ ಬಾರದೆ ಹೊರಳಾಡಿದರು.  ರಸ್ತೆ ನಿರ್ಮಾಣದ ಸ್ಥಳ ವೀಕ್ಷಣೆಗೆ ಹೃದಯದೇವ ರಾತ್ರಿಸಂಚಾರ ಕೈಗೊಂಡ. ರಸ್ತೆ ಸಾಗುವ ಹಾ...

ಬೊಮ್ಮಯ

Image
 *ಕಾಡಿನಲ್ಲೊಂದು ಮನೆ. ಅಲ್ಲೊಬ್ಬ ಹುಡುಗ. ಹೆಸರು ಬೊಮ್ಮಯ.  -ಅಜ್ಜೀ ಅಜ್ಜೀ ನಾನು ಕಟ್ಟಿಗೆ ತರಲು ಕಾಡಿಗೆ ಹೋಗುತ್ತಿದ್ದೇನೆ. -ಮಗಾ ನೀನು ಹೋದ‌ಮೇಲೆ ನನಗೆ ಹಸಿವೆಯಾದರೆ ನಾನು ಕಾಯಲೇ?   -ಕಾಯಬೇಡ ಊಟ ಮಾಡಿಬಿಡು. -ಊಟವಾದ ಮೇಲೆ ನಿದ್ದೆ ಬಂದರೆ? -ನಿದ್ದೆ ಬಂದರೆ ಚಾಪೆಹಾಸಿ ಮಲಗು. -ಚಳಿಯಾದರೆ.. -ಅಯ್ಯೋ ಮುದುಕಿ, ಚಳಿಯಾದರೆ ಕಂಬಳಿಯಲ್ಲಿ ಮುದ್ದೆಯಾಗಿ ಮುರುಟಿಕೊಂಡು ಮಲಗು! ನಾನು ಹೋಗುತ್ತೇನೆ. *ಬೊಮ್ಮಯ ಹೆಗಲಲ್ಲಿ ಕೊಡಲಿ ಹೊತ್ತು ಹೊರಟ. ಕಾಡಿನ ಮಧ್ಯದಲ್ಲಿ ಒಂದು ಒಣಮರ ಕಾಣಿಸಿತು. -ಆಹಾ, ದೇವರ ದಯೆ. ಈ ಮರ ಒಂದು ತಿಂಗಳ ಕಟ್ಟಿಗೆಗೆ ಸಾಕು. ಈಗಲೇ ಉರುಳಿಸಿಬಿಡುತ್ತೇನೆ. -ಚಕ್ ಚಕ್ ಚಕ್.. *ಆಗ.. -ಕೀಂ ಕೀಂ..(ಹಕ್ಕಿ) ಅಯ್ಯೋ ಮಾರಾಯನೇ, ಈ ಮರ ಕಡಿಯಬೇಡ. ಇಲ್ಲಿ ನನ್ನ ಗೂಡಿದೆ. -ಯಾರಮ್ಮ‌ ನೀನು? ಬದಿಗೆ ಸರಿ. ಮರ ನಿನ್ನ ತಲೆಗೆ ಬಿದ್ದೀತು. -ಅಯ್ಯೋ ಅಣ್ಣಾ ಈ ಮರದ ಗೂಡಲ್ಲಿ   ನಿನ್ನೆಯಷ್ಟೇ ಕಣ್ಣುಬಿಟ್ಟ ನನ್ನ ಎರಡು ಪುಟ್ಟ ಮರಿಗಳಿವೆ. -ಹೌದಾ, ಅವಕ್ಕೆ ಎದ್ದು ಈಚೆ ಬರಲು ಹೇಳು. ಮರ ಬೀಳುವಾಗ ಮನೆಯೂ ಬೀಳುತ್ತದೆ ಅಂತ ಎಬ್ಬಿಸಿ ಕರೆದುಕೊಂಡು ಹೋಗು. -ಅಣ್ಣಾ. ಅವು ಪುಟ್ಟ‌ಮರಿಗಳು. ಎದ್ದು ಬರಲು ಅವು ಹಾರಲು ಕಲಿತಿಲ್ಲ. -ಓ  ಮುದ್ದು ಪೆದ್ದ ಹಕ್ಕಿಯೇ, ನೀರಿಗೆ ಬಿದ್ದರೆ ತನ್ನಿಂತಾನೇ ಈಜಲು ಬರುತ್ತದೆ. ಮರ ಬಿದ್ದಾಗ ತನ್ನಿಂತಾನೇ ಹಾರಲು ಕಲಿಯುತ್ತಾವೆ ಬಿಡು. -ಅಯ್ಯೋ ದೇವರೇ, ಹಾರಲು ಅವ...

ಗೀಜಗನ ಮದುವೆ

Image
ಗೀಜಗಣ್ಣನಿಗೆ ಊರು ತುಂಬಾ ಗೆಳೆಯರು.   ಅವನ‌ ಗೆಳೆಯರಿಗೆ ಅವನೆಂದರೆ ಪ್ರಾಣ. ಆದರೂ ಗೀಜಗಣ್ಣ ಬೇಸರಗೊಂಡಿದ್ದ. ಕಾರಣ ಅವನ ಗೆಳತಿಯರು ಅವನನ್ನು ಅಷ್ಟೊಂದು ಇಷ್ಟಪಡುತ್ತಿರಲಿಲ್ಲ. ಯಾವ ಗೆಳತಿಯೂ,  "ಓ ಗೀಜಗ ನೀನಂದ್ರೆ ನನಗಿಷ್ಟ" ಅನ್ನುತ್ತಿರಲಿಲ್ಲ. ಯಾಕೆಂದರೆ ಗೀಜಗನಿಗೆ ಚಂದದ ಮನೆ ಇರಲಿಲ್ಲ. ಅವನು ಒಂದು ಹಳೆಯ ಮುರುಕು ಗೂಡಿನಲ್ಲಿ ವಾಸವಾಗಿದ್ದ. ಅದು ಅವನ ಅಜ್ಜನೋ ಪಿಜ್ಜನೋ ಕಟ್ಟಿದ ಮನೆಯಾಗಿತ್ತು. ಹತ್ತು ವರುಷದ ಹಿಂದೆ ಕಟ್ಟಿದ್ದ ಹಳೆಯದಾದ ಮನೆ. ಅದು ಮಳೆ ಬಂದರೆ ಸೋರುತ್ತಿತ್ತು. ಗಾಳಿಗೆ ಅದರ ಗೋಡೆಗಳು ಅಲುಗಾಡುತ್ತಿದ್ದವು. ಮಲಗಲು ಬೆಚ್ಚಗಿನ ಜಾಗವೇ ಇರಲಿಲ್ಲ. ಅದಕ್ಕೆ ಅವನು ಬೇಸರಗೊಂಡಿದ್ದ. ಅವನ ಚಪ್ಪೆಮುಖ ನೋಡಿದ ಅವನ ಗೆಳೆಯರು ಅವನಿಗೆ ಆ ಮನೆಯನ್ನು ತುಸು ರಿಪೇರಿ ಮಾಡಿ ಕೊಟ್ಟರು. ತೂತಾದ ಮಾಡು ಮತ್ತು ಗೋಡೆಗೆ ಒಂದಷ್ಟು ಒಣ ಎಲೆ ತಂದು ಮುಚ್ಚಿಸಿಕೊಟ್ಟರು. ಗದ್ದೆಯಿಂದ ನಯವಾದ ಒಂದಷ್ಟು  ಆವೆಮಣ್ಣನ್ನು ಹೊತ್ತುತಂದು ತೇಪೆಹಾಕಿದರು. ಮತ್ತೊಂದಷ್ಟು ಗೆಳೆಯರು  ಬಣ್ಣ ಮಾಡಿಕೊಟ್ಟರು. ಅವನಿಗೆ ಸ್ವಲ್ಪ ಸಮಾಧಾನವಾಯಿತು. ಮರುದಿನ ಅವನು ತನ್ನ ಗೆಳತಿಯರನ್ನು ಕರೆದುಕೊಂಡು ಬಂದು ಜಂಭದಿಂದ ಮನೆ ತೋರಿಸಿದ. ಆದರೆ ಗೆಳತಿಯರಿಗೆ ಆ ಮನೆ ಇಷ್ಟವಾಗಲಿಲ್ಲ. ಅವರಿಗೆ ಆ ಮನೆಯಲ್ಲಿ ಸಮಸ್ಯೆ ಕಾಣಿಸುತ್ತಿತ್ತು. "ಈ ಮನೆ ಅದೇ ಹಳೆಯ ಮನೆ. ಏನೂ ಚೆನ್ನಾಗಿಲ್ಲ. ಮಲಗುವ ಕೋಣೆ ಚಿಕ್ಕದು ಮತ್ತು ಕರೀ ಕತ್ತಲು. ಇದರ ಮಾಡಿ...