Posts

Showing posts from March, 2023

ಬೊಮ್ಮಯ 2

Image
ಒಂದು ಮುಸ್ಸಂಜೆ. ತಂದನಿ ತಾನೋ..ತಾನಿ ತಂದಾನೋ.. ಅವಲಕ್ಕಿ ಎಲ್ಲ ಬೊಮ್ಮ ತಿಂದಾನೋ.. ಅಜ್ಜಿ ಬಾವಿಯಿಂದ ನೀರೆಳೆಯುತ್ತಾಳೆ. ಅಯ್ಯೋ.. ಸೊಂಟ..  ಸೊಂಟ ಉಳುಕಿ , ಅಜ್ಜಿ‌ ನೆಲದಲ್ಲಿ‌ ಕುಳಿತುಕೊಳ್ಳುತ್ತಾಳೆ. ಅಯ್ಯೋ ಸೊಂಟ ಉಳುಕಿತು. ಕೊಡ ಹಗ್ಗ ಬಾವಿಗೆ ಬೀಳುತ್ತದೆ.  ಸರ್ರ್... ಢುಳುಂ..! ಅಯ್ಯೋ..  ಅಯ್ಯೋ, ನೀರಿಗೆ ಬಿದ್ದ ಸದ್ದು, ಅಜ್ಜೀ..(ಅಜ್ಜಿ ಬಾವಿಗೆ ಬಿದ್ದರಾ..?) ಓಡಿ ಬರ್ತಾನೆ.  ನೋಡ್ತಾನೆ ಬೆನ್ನು ಬಾಗಿಸಿ ವಕ್ರವಾಗಿ ಅಜ್ಜಿ ಕೂತಿದೆ ಅಜ್ಜೀ...(ಅಬ್ಬ ಸದ್ಯ ಅಂಥದ್ದೇನೂ ಆಗಿಲ್ಲ) ಏನಾಯ್ತಜ್ಜೀ.. ಅಜ್ಜಿ-  ಸೊಂಟ ಉಳುಕಿ ಚುಳುಕ್ ಚುಳುಕ್.. ಹಗ್ಗ ಕೊಡ ಬುಳುಕ್ ಬುಳುಕ್.. ನೋಡ್ತಾನೆ. ಕೊಡ ಅರ್ಧ ಮುಳುಗಿ ತೇಲುತ್ತಿತ್ತು. ಛೆ! ಒಳಗೆ ಕುಡಿಯಲು ನೀರಿಲ್ಲ ಮಗಾ? ನೀನ್ಯಾಕೆ ನೀರೆತ್ತಲು ಹೋಗಬೇಕಿತ್ತು. ನನ್ನಲ್ಲಿ ಹೇಳಿದ್ದರೆ ನಾನು ತರುತ್ತಿದ್ದೆ ಅಲ್ವ? ಮನೆಯಲ್ಲಿ ಹೆಣ್ಣುಮಗಳಿದ್ದಿದ್ರೆ ನನಗೆ ಈ ಕಷ್ಟ ಬರ್ತಿರಲಿಲ್ಲ ಮಗಾ! ಬಾ. ಈಗ ಕತ್ತಲಾಯಿತು. ನಾಳೆ ಬೆಳಗ್ಗೆ ಬಾವಿಗೆ ಇಳಿದು ಕೊಡ ಎತ್ತಿ ಕೊಡ್ತೇನೆ. ಅಜ್ಜಿ- ಹೇಗೆ ಬಾವಿಗೆ ಇಳಿಯೋದು? ಹಗ್ಗವೂ ಒಳಗೆ ಬಿದ್ದಿದೆ ಅಲ್ವ?  ಬೊ: ಚಿಂತಿಸಬೇಡ.ಏನಾದರೂ ಉಪಾಯ ಯೋಚಿಸ್ತೇನೆ. ಈಗ ಬಾ. ರಾತ್ರಿ ಬೊಮ್ಮಯ ಯೋಚಿಸ್ತಾ ಮಲಗಿರುವಾಗ.. 'ಗುಟಕ್‌.ಗುಟಕ್..' ಅರೇ, ಏನದು ಸದ್ದು? ಹೋಗಿ ನೋಡ್ತಾನೆ.  ಓ ಅಜ್ಜಿಗೆ ಬಾಯಾರಿಕೆ ಆಗಿದೆ. ನೀರು ಕುಡಿದರೆ ಸರಿಯ...

ಮಹತಿ ಕಳ್ಳರನ್ನು ಓಡಿಸಿದಳು

Image
 ಮಹತಿ ಪ್ರಾಣಿಪಕ್ಷಿಗಳ ಸದ್ದನ್ನು ಅನುಕರಣೆ ಮಾಡಿ ಅವಳ ಸ್ನೇಹಿತರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಳು. ಮಹತಿ: ಬೌ..ಬೌ..ವೌ..ಆಗ ಬೆಕ್ಕಿನ‌ಮರಿ  ಹಾಲು ಬೇಕು ಅಂತ ಕೂಗಿತು..ಮಿಯಾಂ ಮಿಯಾಂ.   ಮ: ಮನೆಯ ಪಕ್ಕದಲ್ಲೇ ಒಂದು ನದಿ ಹರಿಯುತ್ತಿತ್ತು.. ಸ್.. ಎಲ್ಲರೂ ಖುಷಿ ಮತ್ತು ಆಶ್ಚರ್ಯದಿಂದ ಅವಳ ಈ ಚಮತ್ಕಾರವನ್ನು ನೋಡುತ್ತಿದ್ದರು.‌ ಸದ್ದು ಮಾಡುವಾಗ ಬಾಯಿಯನ್ನು ಹಿಗ್ಗಿಸಿ ಕುಗ್ಗಿಸಿದಾಗ  ಅವಳ‌ಮುಖವೂ ವಕ್ರವಾಗುವುದನ್ನು ನೋಡುವಾಗ ಎಲ್ಲರಿಗೂ ತಮಾಷೆ ಎನ್ನಿಸಿ ನಗುತ್ತಿದ್ದರು. ಅವರೆಲ್ಲರ ಕೇಕೆ, ಚಪ್ಪಾಳೆಯಿಂದ ಮಹತಿ ಮತ್ತಷ್ಟು ಉತ್ಸಾಹದಿಂದ ಅನುಕರಣೆ ಮಾಡುತ್ತಿದ್ದಳು. ಮಹತಿ: ಆಗ.. ಮರದ ಮೇಲೆ‌ ಇದ್ದ ನವಿಲು‌ ಹೀಗೆ ಕೂಗಿತು.. ಕೇಂ ಕೇಂ... ಎಲ್ಲರೂ: ಏ.. ಸೂಪರ್ ಸೂಪರ್.. ಮ: ಆಗ ಒಂದು ಹುಲಿ ಘರ್ಜಿಸಿತು.. ಘರ್ರ್..... ಅದನ್ನು ನೋಡಿ ಮರದ ಮೇಲೆ ಮಂಗ.. ಕಿ.ಕಿ..ಕಿ..ಕಿ.. ಎಲ್ಲರೂ: ಹ್ಹಹ್ಹಹ್ಹಾ.. ಅವಳ ಗುರುಗಳಿಗೂ ಅವಳ ಈ ಪ್ರತಿಭೆ ಇಷ್ಟವಾಗಿತ್ತು.  ಟೀಚರ್: ರೈಲು ಹೇಗೆ ಕೂಗುತ್ತದೆ ಮಹತಿ..? ಮಹತಿ: ಕೂ..ಚುಚುಕ್ ಚುಚುಕ್..ಚುಚುಕ್ ಚುಚುಕ್..ಕೂ.. ಸ್ನೇಹಿತರು ಅವಳಲ್ಲಿ ಬೇರೆ ಬೇರೆ ಸದ್ದನ್ನು ಮಾಡುವಂತೆ ಕೇಳಿ ಕೇಳಿ ಖುಷಿಪಡುತ್ತಿದ್ದರು‌. ಇದರ ಜೊತೆ ಮಹತಿಗೆ ಕೈಯ ನೆರಳಿನಿಂದ ಪ್ರಾಣಿಪಕ್ಷಿಗಳ ಆಕೃತಿಗಳನ್ನು ಗೋಡೆ ಮೇಲೆ ಮೂಡಿಸುವ ಆಟವೂ ತಿಳಿದಿತ್ತು.  ಅವಳ ಈ ಹವ್ಯಾಸಗಳಿಂದಾಗಿ ಮಹತಿ ...

ಪೆಂಗಪ್ಪ ಮಂಗಪ್ಪ

Image
ಪೆಂಗಪ್ಪಾ, ಈ ಸಾರಿ ನಮ್ಮ ಉರುಳಿಗೆ ಹಂದಿ ಬೀಳೋದ್ ಗ್ಯಾರಂಟಿ ಮಾರಾಯ. ಪೆ- ಹಂದಿ ಬೀಳದಿದ್ರೆ ಹೋಗಲಿ. ಮೊಲವೋ, ಜಿಂಕೆನಾದ್ರೂ ಬೀಳಬೇಕು. ಬರೇ ಅನ್ನ‌ ಸಾರು ತಿಂದು ನಾಲಗೆ ಜಡ್ಡುಗಟ್ಟಿ ಹೋಗಿದೆ. ಮ- ಹಂದಿಯೇ ಬೀಳ್ತದೆ ಬಿಡು. ಉರುಳು ಬಲವಾಗಿ ಇದೆ. ಸರಿ. ಈಗ ನಾನು ಕಾಡಿನ‌ ಈ ಕಡೆ ಹೋಗ್ತೇನೆ. ನೀನು ಆ ಕಡೆ ಹೋಗು. ಹಂದಿ ಕಾಣಿಸಿದರೆ ಇಬ್ಬರೂ ಗದ್ದಲ ಮಾಡ್ತಾ ಈ ಉರುಳಿನ ಬಳಿಗೆ ಹಂದಿಯನ್ನು ಓಡಿಸಿಕೊಂಡು ಬರೋದು ಪ್ಲಾನು. ಪೆ- ಓಕೆ. ಹಂದಿ ಕಾಣಿಸಿದರೆ ನಾನು ನವಿಲಿನ ಹಾಗೆ ಕೂಗಿ ನಿನಗೆ ಸೂಚನೆ ಕೊಡ್ತೇನೆ.  ಮಂ: ಬೇಡ ನಾನು ಫೋನ್ ಮಾಡ್ತೇನೆ. ಪೆ: ಬೇಡ ಬೇಡ. ಆಗ ಪ್ರಾಣಿಗಳಿಗೆ ಮನುಷ್ಯರು ಇರೋದು ಗೊತ್ತಾಗ್ತದೆ. ಮಂ: ಮೆಸೇಜು ಮಾಡಿದರೆ? ಪೆ: ಅಯ್ಯೋ ಪೆಂಗ. ಕಾಡಿನಲ್ಲಿ‌ ನೆಟ್ವರ್ಕ್ ಸಮಸದಯೆ ಆಗಿ ಸಮಸ್ಯೆ ಆಗ್ತದೆ. ನಾನು ನವಿಲಿನ ಹಾಗೆ ಕೂಗ್ತೇನೆ. ಅದೇ ಒಳ್ಳೆಯದು. ಮ-ಸರಿ ಒಮ್ಮೆ ಕೂಗಿ ತೋರಿಸು. ಪೆ- ಕೇಂ..ಕೇಂ.. ಮ-ಸೂಪರ್.. ಹಂದಿ ಮೊದಲು ನನಗೆ ಕಾಣಿಸಿದ್ರೆ ನಾನು ಕೂಗ್ತೇನೆ. ಅವರಿಬ್ಬರು ಆ ಬದಿ ಈ ಬದಿ ಹೋದರು. ಪೆಂಗಪ್ಪ ಕೂತಿದ್ದ. ತುಂಬಾ ಸಮಯವಾದರೂ ಹಂದಿಯ ಸುಳಿವಿಲ್ಲ.  ಪೆ- ದರಿದ್ರ.. ಇಂದು ಒಂದು ಹಂದಿನೂ ಕಾಣಿಸ್ತಾ ಇಲ್ಲ. ಇರಲಿ ಕಾಯೋಣ. ಯೋಚಿಸ್ತಾನೆ. ಮಂಗಪ್ಪ ಏನ್ ಮಾಡ್ತಿರಬಹುದು? ಅತ್ತ ಕಡೆ ಮಂಗಪ್ಪ.. ಮ-ಯಬಾ. ಭಯಂಕರ ಸೊಳ್ಳೆಕಾಟ. ಹಂದಿ ಬರೋ ತನಕ ಹೆಂಗಪ್ಪಾ ಕೂತಿರೋದು. ಒಂದು ಉಪಾಯ ಮಾಡ್ತೇನೆ ಪಂಚೆಯನ್ನು ಬಿಚ್ಚಿ ತ...