Posts

Showing posts from June, 2023
Image
 ಗದ್ದೆಯ ಅಂಚಿನ ಮಣ್ಣಿನ ಗೂಡಿನಲ್ಲಿ ಡೊಂಗ್ರಿ ಕಪ್ಪೆ ತನ್ನೆರಡು ಮರಿಗಳೊಂದಿಗೆ ವಾಸವಾಗಿತ್ತು. ಜಗಳಗಂಟಿಯಾದ ಡೊಂಗ್ರಿ ಕಪ್ಪೆಗೆ ಮಾತು ಜೋರು.  ಸದಾ ವಟರ್ ವಟರ್ ಅನ್ನುತ್ತಿತ್ತು. ತನ್ನ ಮನೆ ಕಡೆ ಯಾರಾದರೂ ಬಂದರೆ, ತನ್ನ ವಿಷಯವನ್ನು ಯಾರಾದರೂ ಮಾತಾಡಿದರೆ ಅದು ಜಗಳಕ್ಕೆ ನಿಂತು ಅವರನ್ನು ಅಲ್ಲಿಂದ ಓಡಿಸುತ್ತಿತ್ತು.‌ ಮತ್ತೆಂದೂ ಬರದ ಹಾಗೆ ಬಯ್ದು ಕಳಿಸುತ್ತಿತ್ತು. ಆದ್ದರಿಂದಲೇ ಡೊಂಗ್ರಿಯ ಗೆಳೆತನ‌ ಯಾರೂ ಮಾಡುತ್ತಿರಲಿಲ್ಲ. ಒಂದು ಮುಂಜಾನೆ ಡೊಂಗ್ರಿ ಕಪ್ಪೆ ತನ್ನ ಪುಟ್ಟ ಮರಿಗಳೊಂದಿಗೆ ತನ್ನ‌ ಗೂಡಿನ‌ ಪಕ್ಕ ಚಿಕ್ಕ ಕಲ್ಲಿನ ಮೇಲೆ ಕುಳಿತಿತ್ತು. ಅದು ಮರಿಗಳಿಗೆ ನೀರಿಗೆ ಹಾರುವುದನ್ನು, ಈಜುವುದನ್ನು ಕಲಿಸಲು ಕುಳಿತಿತ್ತು. ಡೊಂಗ್ರಿ ಕಪ್ಪೆ ಕಣ್ಣನ್ನು ಅರ್ಧ ಮುಚ್ಚಿ, ಮುಖದ ಮೇಲೆ ನಗುವಿಲ್ಲದೆ ಕುಳಿತಿತ್ತು. ಕಪ್ಪೆ ಮರಿಗಳು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಸುತ್ತಲ ಪ್ರಕೃತಿಯನ್ನು ನೋಡುತ್ತಾ ಕುಳಿತಿದ್ದವು. ಆಗ ತಾನೇ ಬೆಳಗಾಗುತ್ತಿತ್ತು. ಸೂರ್ಯನ‌ ಬಿಸಿಲಿಗೆ ಗದ್ದೆಯ ಬದುವಿನಲ್ಲಿದ್ದ ಹುಲ್ಲಿನ ಮೇಲೆ ಮಂಜಿನ‌ ಹನಿಗಳು‌ ಹೊಳೆಯುತ್ತಿದ್ದವು. ಆಗಸದಲ್ಲಿ  ಮೋಡಗಳು ತೇಲಾಡುತ್ತಿದ್ದವು. ಸುತ್ತಲೂ ಇಬ್ಬನಿ ಮುಸುಕಿತ್ತು. ಅಮ್ಮನ ಜೊತೆ ಕೂತಿದ್ದ  ಮರಿಗಳಿಗೆ ಇದನ್ನೆಲ್ಲಾ ನೋಡುತ್ತಾ ಖುಷಿಯಾಯಿತು. ಒಂದು ಮರಿ ಅಮ್ಮನಲ್ಲಿ ಹೇಳಿತು. ಮರಿ: ಅಹಾ ಅಮ್ಮ.‌ ಈ ಪರಿಸರ ಎಷ್ಟು‌ ಸುಂದರವಾಗಿದೆ. ನೋಡಿದರೆ ನೋಡ್ತಾನೇ ಇರೋಣ...

ಮಾತು ಕೇಳದ ಹಲ್ಲಿ

Image
 ಪಿಂಚು ಹಲ್ಲಿ ಮಹಾ ಒರಟ. ಅದು ತನ್ನ ಅಮ್ಮ ಹಲ್ಲಿಯ ಮಾತನ್ನು ಕೇಳುತ್ತಿರಲಿಲ್ಲ. ಮನೆಯ ಹಿರಿಯನಾದ ಅಜ್ಜ ಹಲ್ಲಿಯ ಮಾತನ್ನೂ‌ ಕೇಳುತ್ತಿರಲಿಲ್ಲ. ಮನೆಯವರಿಗೆಲ್ಲ ಅದನ್ನು ಸಹಿಸಲು ಕಷ್ಟವಾಗುತ್ತಿತ್ತು. ಅದರ ಕೀಟಲೆಗಳನ್ನು ನೋಡಿಕೊಂಡು ಸುಮ್ಮನೆ‌ ಇರಬೇಕಾಗಿತ್ತು. ಅದರ ತುಂಟತನದಿಂದ ಬೇರೆಯವರಿಗೇನೂ ತೊಂದರೆ ಆಗುತ್ತಿರಲಿಲ್ಲ‌. ಆದರೆ ಅದುವೇ ತೊಂದರೆಗೊಳಗಾಗುತ್ತಿತ್ತು.  ಅಜ್ಜ: ಪಿಂಚು, ನೀನು ಜಾಣನಾಗಬೇಕು. ಅಮ್ಮ‌ ಅಥವಾ ಮನೆಯ ಹಿರಿಯರು‌‌‌ ಹೇಳಿದ ಮಾತನ್ನು ‌ಕೇಳಬೇಕಪ್ಪಾ. ನಾವು ಅನುಭವದಿಂದ ಕಲಿತ ಬುದ್ಧಿಮಾತನ್ನು ಹೇಳಿದರೆ ಅದು ನಿನ್ನ ಒಳ್ಳೆಯದಕ್ಕೆ ತಾನೇ? ಅದರಂತೆ ನಡೆದರೆ ಜೀವನ ಸಂತೋಷಮಯವಾಗುತ್ತದೆ. ಅಪಾಯದಲ್ಲಿ ಸಿಕ್ಕಾಗ ನೆರವಿಗೆ ಬರೋದು ನಮ್ಮ ಮಾತುಗಳೇ. ಪಿಂಚು- ಅಯ್, ಹೋಗಜ್ಜ ನೀನು.‌ ಯಾವಾಗ್ಲೂ ಇದನ್ನೇ ಹೇಳ್ತೀಯ.‌  ಅಜ್ಜ: ಹಾಗಲ್ಲ ಮಗೂ.. ಪಿಂಚು: ಆಯ್ತಜ್ಜ. ನಿನ್ನ ಮಾತು ಈ ಸಾರಿ ಕೇಳ್ತೇನೆ. ಆದ್ರೆ ಎಲ್ಲ ಸಾರಿಯೂ ಅಲ್ಲ. ಅಮ್ಮ ಅಂತೂ ಹಾಗ್ ಮಾಡ್ಬೇಡ, ಹೀಗ್ ಮಾಡ್ಬೇಡ ಅಂತಾನೇ ಇರ್ತಾಳೆ.‌ ಅದೆಲ್ಲ ನನಗಾಗಲ್ಲ. ನಂಗೆ ಹೇಗೆ ಬೇಕೋ ಹಾಗಿರ್ತೀನಿ. ಹಾಗೇ ಮಾಡ್ತೀನಿ. ಅಜ್ಜ: ಅಯ್ಯೋ, ನಿಂಗೆ ಎಷ್ಟು ಹೇಳಿದ್ರೂ ಅಷ್ಟೇ. ಇರಲಿ, ನಾನು ನಿಂಗೊಂದು ಕತೆ ಹೇಳ್ತೇನೆ. ಕತೆ ಅಂದ್ರೆ ಕತೆ ಅಲ್ಲ. ಶತ್ರುವಿನಿಂದ ಬಚಾವಾಗುವ ಒಂದು ಉಪಾಯ. ಸ್ವಲ್ಪ ಕೂತು ಕೇಳ್ತೀಯಾ? ಪಿಂಚು: ಆಗಲಿ, ಆಸಕ್ತಿ ಬಂದ್ರೆ ಪೂರ್ತಿ ಕೇಳ್ತೀನಿ. ಇಲ್ಲ...